ಟಿ.ಎಸ್.ರಾಘವೇಂದ್ರ, ಗುಟ್ಟಹಳ್ಳಿ ರವರ ಸಾರಥ್ಯದಲ್ಲಿ

ಮುನ್ನುಡಿ


    ಆತ್ಮೀಯ ವೃತ್ತಿ ಭಾಂದವರೇ,

      ನಾನು 1998 ರಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದೆನು, ನಮ್ಮ ಕುಟುಂಬದಲ್ಲಿ ಒಟ್ಟು 7 ಮಂದಿ ಇದೇ ವೃತ್ತಿಯಲ್ಲಿದ್ದೇವೆ. ನಮ್ಮ ತಂದೆ ದಿವಂಗತ ಟಿ.ಕೆ. ಶ್ರೀನಿವಾಸರಾವ್ ಅವರು ಸುಮಾರು 38 ವರ್ಷಗಳ ಕಾಲ ಸರ್ಕಾರಿ.ಪ್ರಾ.ಶಾ. ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ಹೆಸರು ಪಡೆದವರು. ಪ್ರಾರಂಭದಲ್ಲಿ ಬೇರೆ ಬೇರೆ ವೃತ್ತಿಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದರೂ ದೇವರು,"ನೈಜ್ಯ ದೇವರುಗಳು" ಆದ ಮಕ್ಕಳ ಸೇವೆ ಮಾಡಲು ಈ ವೃತ್ತಿಗೇ ಮರಳುವಂತೆ ಮಾಡಿದರು. ನಮ್ಮ ತಂದೆಯವರ ಮಾತಿನಂತೆ " ನಾವು ನಮ್ಮ ಶಾಲೆಯಲ್ಲಿರುವ ಮಕ್ಕಳಿಗೆ ಒಳ್ಳೆಯದನ್ನು ಮಾಡಿದರೆ,ಮುಂದೆ ನಾವು ಹೆತ್ತ ಮಕ್ಕಳನ್ನು ದೇವರು ಚೆನ್ನಾಗಿ ಇಟ್ಟರುತ್ತಾನೆ, ಶಿಕ್ಷಕರೇ ಶಿಕ್ಷಣದ ಸಾರಥಿಗಳು" ಎಂಬ ಮಾತಿನಂತೆಯೇ ದೇವರು ನನ್ನನ್ನು ಮತ್ತು ನಮ್ಮ ಕುಟುಂಬವನ್ನು ಈಗ ಗೌರವಯುತ ಸ್ಥಾನದಲ್ಲಿರಿಸಿದ್ದಾನೆ.

      ಮಕ್ಕಳಿಗೆ ಹಲವು ವಿನೂತನ ಮಾರ್ಗಗಳನ್ನು ಅನುಸರಿಸಿ ಬೋದಿಸುತ್ತಿರುವ (ವಿಶೇಷವಾಗಿ ವಿಜ್ಞಾನ & ಗಣಿತ) ನನಗೆ, ಶಿಕ್ಷಕ ವೃಂದಕ್ಕೆ ಉಪಯುಕ್ತವಾಗುವಂತಹ ಕೆಲಸಗಳನ್ನು ಮಾಡಬೇಕೆಂಬುದು ಪ್ರಮುಖ ಉದ್ದೇಶವಾಗಿದೆ, ಇದೇ ಉದ್ದೇಶದಿಂದ ಈ ಬ್ಲಾಗನ್ನು ಆರಂಭಿಸಿದ್ದೇನೆ. ಇದನ್ನು ರಚಿಸಲು ತಾಂತ್ರಿಕ ಮಾರ್ಗದರ್ಶನ ನೀಡಿದ ನನ್ನ ಮಿತ್ರರು, ರಾಮಸಾಗರ ಶಾಲೆಯ ಶಿಕ್ಷಕರಾದ ಶ್ರೀ ಮನೋಹರ್ ರವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ, ನನ್ನನ್ನು ಹುರುದುಂಬಿಸಿ ಪ್ರೋತ್ಸಾಹಿಸಿದ  ಶ್ರೀ ಚಿತ್ತೇಗೌಡ, ಶಿಕ್ಷಕರು,ದೊಡ್ಡಬಳ್ಳಾಪುರ ಮತ್ತು ಅವರ ನೇತೃತ್ವದ ತಂಡ, ಶ್ರೀ ಶ್ರೀಧರಶರ್ಮ ಮು.ಶಿ ಹಾಗು ನಮ್ಮಬಂಗಾರಪೇಟೆ BEO ಶ್ರೀ ಕೆಂಪಯ್ಯ,BRC ಸಂಯೋಜಕರಾದ ಶ್ರೀಮತಿ ರಾಧಮ್ಮ,  ಮತ್ತು CRP ಶ್ರೀ ತ್ಯಾಗರಾಜ, BRC  ಸಂಪನ್ನೂಲ ವ್ಯಕ್ತಿಗಳಿಗೂ, ನನ್ನ ಸಹೋದ್ಯೋಗಿಗಳಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ, ಸದಾ ಈ ಬ್ಲಾಗಿನ ವೀಕ್ಷಕರ ಸಲಹೆಗಳ ನಿರೀಕ್ಷೆಯಲ್ಲಿರುವ  

                                                                                        - ಇತಿ ನಿಮ್ಮವ

                                                                      ಟಿ.ಎಸ್.ರಾಘವೇಂದ್ರ  

                                                                                                    

SUBJECT WISE DIGITAL BLOGS CLICK